ನಾವು ಮಂಗಳಗ್ರಹ,
ಚಂದ್ರಲೋಕಕ್ಕೂ ಕಾಲಿಟ್ಟಿದ್ದೇವೆ.
ಆದರೆ ಪಕ್ಕದ
ಮನೆಯವರೊಂದಿಗೆ ಅಪರಿಚಿತರಂತಿದ್ದೇವೆ.
ನಮ್ಮದೇ ಸಮುದಾಯದ ವ್ಯಕ್ತಿಗಳ
ಪರಿಚಯ ನಮಗಿರುವುದಿಲ್ಲ,
ನಮ್ಮ ಸಮುದಾಯದಲ್ಲಿ
ಕೆಲಸ ನಿರ್ವಹಿಸುವ
ಸಂಸ್ಥೆಗಳ ಪರಿಚಯವಿರುವುದಿಲ್ಲ.
ಸಂದೇಹವೇ ? ಹಾಗಾದರೆ ಉದಾಹರಣೆಗೆ-
1.
ನಮ್ಮದೇ ಸಮುದಾಯದಲ್ಲಿರುವ ಐದು ಪ್ರಮುಖರ ಹೆಸರು ಹೇಳಿ.
2.
ಐದು ಜನ ಡಾಕ್ಟರ್ ಗಳ ಹೆಸರು ಹೇಳಿ.
3.
ಐದು ಜನ ಲಾಯರ್ ಗಳ ಹೆಸರು ಹೇಳಿ.
4.
ಐದು ಉತ್ತಮ ಸಂಸ್ಥೆಗಳ ಹೆಸರು ಹೇಳಿ.
ಹೀಗೆ ಹಲವಾರು ವ್ಯಕ್ತಿಗಳ ಮಾಹಿತಿ ಈ ಡೈರೆಕ್ಟರಿಯು ಒಳಗೊಂಡಿರುತ್ತದೆ. ಕೇವಲ ವ್ಯಕ್ತಿಗಳ ಮಾಹಿತಿ ಮಾತ್ರವಲ್ಲ, ಹಲವಾರು ಪ್ರಮಖ ವಿಷಯಗಳ ಕುರಿತು ಲೇಖನಗಳನ್ನು ಈ ಡೈರೆಕ್ಟರಿ ಒಳಗೊಂಡಿರುತ್ತದೆ.
ನಮ್ಮ ದಿನನಿತ್ಯದ
ಬದುಕಿಗೆ ಅತ್ಯಗತ್ಯ ಸೇವೆಗಳನ್ನು ಒದಗಿಸುವ, ನಮ್ಮ ಸುತ್ತಮುತ್ತಲೇ ಇರುವ ಅನೇಕ ವೃತ್ತಿನಿರತರ
ಮಾಹಿತಿಗಳನ್ನು ಒಳಗೊಂಡಿರುತ್ತದೆ. ಅಸಂಘಟಿತ ಕಾರ್ಮಿಕರನ್ನು ಒಂದೇ ವೇದಿಕೆಗೆ ತಂದು
ಸಂಘಟಿಸುತ್ತದೆ. ಜನಸಾಮಾನ್ಯರು ಇದರಿಂದ ಉತ್ತಮ ಸೇವೆಯನ್ನು ಪಡೆಯಲು ಸುಲಭವಾಗುತ್ತದೆ. ಆದುದರಿಂದ
ದಯಮಾಡಿ ತಮ್ಮ ಮಾಹಿತಿಯನ್ನು ನಮ್ಮ ಈ ಡೈರೆಕ್ಟರಿಯಲ್ಲಿ ಸೇರಿಸಲು ತಪ್ಪದೇ ಕಳುಹಿಸಿಕೊಡಬೇಕಾಗಿ
ವಿನಂತಿ.
